(5)ಸಂಧ್ಯಾ ಸುರಕ್ಷಾ ಯೋಜನೆ


65 ವರ್ಷದ ಅಥವಾ ಮೇಲ್ಪಟ್ಟ ವಯಸ್ಸಿನ ಹಿರಿಯ ಜೀವಗಳನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ದಿಶೆಯಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯನ್ನು ದಿನಾಂಕ:2-7-2007 ರಿಮದ ಮಾಸಾಶನವನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯಡಿ ಫಲಾನುಭವಿಗಳಿಗೆ ರೂ.500/- ಗಳ ಮಾಸಾಶನವನ್ನು ಪಡೆಯುತ್ತಾರೆ. ಕೆಳಕಂಡ ವ್ಯಕ್ತಿಗಳು ಈ ಮಾಸಾಶನವನ್ನು ಅರ್ಹರಾಗಿರುತ್ತಾರೆ.
(ಅ) ಸಣ್ಣ ರೈತರು
(ಆ) ಅತೀ ಸಣ್ಣ ರೈತರು
(ಇ) ಕೃಷಿ ಕಾರ್ಮಿಕರು
(ಈ) ನೇಕಾರರು
(ಉ) ಮೀನುಗಾರರು
(ಊ) ಅಸಂಘಟಿತ ವಲಯದ ಕಾರ್ಮಿಕರು, ಆದರೆ ಇದು”Building and other Construction workers” (Regulation of Employment and Conditions of Services) Act, 1996 ಅಡಿಯಲ್ಲಿ ಬರುವ ವ್ಯಕ್ತಿಗಳಿಗೆ ಅನ್ವಯಿಸುವುದಿಲ್ಲ ಮತ್ತು ಅದರಡಿ ಮಾಸಾಶನ ಪಡೆಯುವವರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ.

ನಿಬಂಧನೆಗಳು :
1. ಪತಿ, ಪತ್ನಿಯ ಸಂಯೋಜಿನ ವಾರ್ಷಿಕ ಆದಾಯ ರೂ.20,000/- ಕ್ಕಿಂತ ಹೆಚ್ಚಿಗೆ ಇರಕೂಡದು.

2. ಫಲಾನುಭವಿಗಳು ಪತಿ ಅಥವಾ ಪತ್ನಿಯ ಸಂಯೋಜಿತ ಠೇವಣಿ ಮೌಲ್ಯ ರೂ.10.000ಕ್ಕಿಂತ ಹೆಚ್ಚಿಗೆ ಇರಬಾರದು.

3. ಯಾವುದೇ ರೀತಿಯ ಪಿಂಚಣಿಯನ್ನು ಸಾರ್ವಜನಿಕ/ಖಾಸಗಿ ಮೂಲದಿಂದ ಪಡೆಯುತ್ತಿರಬಾರದು.

4. ಫಲಾನುಭವಿಗಳಿಗೆ ಗಂಡು ಮಕ್ಕಳು ಇದ್ದರೂ ಸಹ ಇವರುಗಳು ಫಲಾನುಭವಿಗಳನ್ನು ಪೋಷಿಸದೆ ಇದ್ದಲ್ಲಿ ಈ ಯೋಜನೆಯಡಿ ಮಾಸಾಶನಕ್ಕೆ ಅರ್ಹರಾಗಿರುತ್ತಾರೆ.

5. ಜನನ ಪ್ರಮಾಣ ಪತ್ರ, ವೈದ್ಯಕೀಯ ದೃಢೀಕರಣ ಪತ್ರ ಅಥವಾ ಭಾರತ ಚುನಾವಣಾ ಆಯೋಗವು ನೀಡಿರುವ ಮತದಾರರ ಗುರುತಿನ ಚೀಟಿಯಲ್ಲಿರುವ ಜನ್ಮ ದಿನಾಂಕವು ವಯಸ್ಸಿಗೆ ಸಂಬಂಧಿಸಿದೆ ದಾಖಲೆಯಾಗಿರುತ್ತದೆ.

ಈ ಯೋಜನಗೆ ಸಲ್ಲಿಸಬೇಕಾದ ದಾಖಲಾತಿಯ ವಿವರ ಕೆಳಕಂಡಂತಿದೆ.

1. ವಯಸ್ಸಿನ ದೃಢೀಕರಣ ಪತ್ರ
2. ಪಡಿತರ ಚೀಟಿ ಸಂಖ್ಯೆ
3. ಆದಾಯ ಪ್ರಮಾಣ ಪತ್ರ
4. ವಾಸಸ್ಥಳ ದೃಢಿಕರಣ ಪತ್ರ
5. ಉದ್ಯೋಗ ಪ್ರಮಾಣ ಪತ್ರಪ್ರಪಂಚದ ಜನಸಂಖ್ಯೆಯಲ್ಲಿ
18.9.2008


ಪ್ರಪಂಚದ ಜನಸಂಖ್ಯೆಯಲ್ಲಿ 1/3 ಭಾಗದಷ್ಟು ಮಂದಿ ದಾರುಣವಾದ ಬಡತನದ ಸಂಕಷ್ಟಕ್ಕೆ ಸಿಲುಕಿ ತೀರಾ ಹಿಂದುಳಿದ ಪ್ರದೇಶಗಳಲ್ಲಿ ವಾಸಿಸುತ್ತಿದ್ದು ಶಿಕ್ಷಣವಿಲ್ಲದೆ ಅನಾರೋಗ್ಯ ಮುಂತಾದ ತೊಂದರೆಗಳನ್ನು ಎದುರಿಸುತ್ತಿದ್ದಾರೆ.


read more...

Designed and Hosted by :
National Informatics Centre
Directorate of Social Security and Pension
Hit Count:
nic