ಸಾಮಾಜಿಕ ಭದ್ರತೆಯ ಸಂಕ್ಷಿಪ್ತ ಇತಿಹಾಸ


1880ನೇ ಇಸವಿಯಲ್ಲಿ ಚಾನ್ಸೆಲರ್ ಆಟೋವನ್ ಬಿಸ್ಮಾರ್ಕ, ಜರ್ಮನಿಯ ದುರ್ಬಲ ಹಾಗೂ ಅಸಹಾಯಕ ಜನತೆಗಾಗಿ ಸಾಮಾಜಿಕ ವಿಮಾ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಬೇರೆ ಯೂರೋಪಿಯನ್ ದೇಶಗಳು ತಮ್ಮ ಜನತೆಯ ಏಳಿಗೆಗಾಗಿ ಈ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡವು. ತದನಂತರ ಅಮೇರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಫ್ರಾಂಕ್ಲಿನ್ ರೂಸ್ ವೆಲ್ಟ್, ಸಾಮಾಜಿಕ ಭದ್ರತಾ ಕಾನೂನನ್ನು 1935ನೇ ಇಸವಿಯಲ್ಲಿ , ದೇಶವನ್ನು ಅತ್ಯಂತ ವಿಷಮ ಆರ್ಥಿಕ ಸಂಕಷ್ಟದಿಂದ (ದಿಗ್ರೇಟ್ ಡಿಪ್ರೆಷನ್) ಮಾಡಲು ಜಾರಿಗೆ ತಂದರು.

ಕರ್ನಾಟಕ ರಾಜ್ಯ ಸರ್ಕಾರವು ಅಶಕ್ತ ವೃದ್ಧರ ರಕ್ಷಣೆಗಾಗಿ 1965 ನೇ ಇಸವಿಯಲ್ಲಿ ರೂ. 40/- ರಂತೆ ಮಾಸಿಕ ಪಿಂಚಣಿಯನ್ನು ನೀಡುತ್ತಾ ಬಂದಿದೆ. ಅಲ್ಲದೆ ಅಂಗವಿಕಲರ ಸಾಮಾಜಿಕ ಭದ್ರತೆಗಾಗಿ 1979ರಲ್ಲಿ ಹಾಗೂ ನಿರ್ಗತಿಕ ವಿಧವೆಯರ ರಕ್ಷಣೆಗಾಗಿ 1984ರಲ್ಲಿ ರೂ.40/-ರಂತೆ ಮಾಸಿಕ ಪಿಂಚಣಿಯನ್ನು ಜಾರಿಗೆ ತಂದಿದೆ.

ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ನೆರವಿನೊಂದಿಗೆ ರಾಷ್ಟ್ರೀಯ ಸಾಮಾಜಿಕ ನೆರವು ಯೋಜನೆಗಳನ್ನು (ಎನ್ ಎಸ್ ಎ ಪಿ) ಅನುಷ್ಠಾನಗೊಳಿಸಿದೆ. ಈ ಮಹತ್ವದ ಯೋಜನೆಯಡಿ ನಾಲ್ಕು ಪ್ರಮುಖ ಸಾಮಾಜಿಕ ಭದ್ರತಾ ಯೋಜನೆಗಳಿವೆ.
1. ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಯೋಜನೆ
2. ರಾಷ್ಟ್ರೀಯ ಕುಟುಂಬ ನೆರವು ಯೋಜನೆ
3. ಅಂಗವಿಕಲ ಯೋಜನೆ
4. ನಿರ್ಗತಿಕ ವಿಧವಾ ವೇತನ ಯೋಜನೆ
5. ಆಮ್ ಆದ್ಮಿ ಬೀಮಾ ಯೋಜನೆ
ಇದಲ್ಲದೆ ಕರ್ನಾಟಕ ರಾಜ್ಯ ಸರ್ಕಾರವು ಕೆಳಕಂಡ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ.
1. ಅಂತ್ಯ ಸಂಸ್ಕಾರ ಯೋಜನೆ
2. ಆದರ್ಶ ವಿವಾಹ ಯೋಜನೆ
3. ಮನಸ್ವಿನಿ ಯೋಜನೆ
4. ಮೈತ್ರಿ ಯೋಜನೆ
5. ಸಂಧ್ಯಾ ಸುರಕ್ಷಾ ಯೋಜನೆ
ಪ್ರಪಂಚದ ಜನಸಂಖ್ಯೆಯಲ್ಲಿ
18.9.2008


ಪ್ರಪಂಚದ ಜನಸಂಖ್ಯೆಯಲ್ಲಿ 1/3 ಭಾಗದಷ್ಟು ಮಂದಿ ದಾರುಣವಾದ ಬಡತನದ ಸಂಕಷ್ಟಕ್ಕೆ ಸಿಲುಕಿ ತೀರಾ ಹಿಂದುಳಿದ ಪ್ರದೇಶಗಳಲ್ಲಿ ವಾಸಿಸುತ್ತಿದ್ದು ಶಿಕ್ಷಣವಿಲ್ಲದೆ ಅನಾರೋಗ್ಯ ಮುಂತಾದ ತೊಂದರೆಗಳನ್ನು ಎದುರಿಸುತ್ತಿದ್ದಾರೆ.


read more...

Designed and Hosted by :
National Informatics Centre
Directorate of Social Security and Pension
Hit Count:
nic