(6) ಆದರ್ಶ ವಿವಾಹ ಯೋಜನೆ


ರಾಜ್ಯದಲ್ಲಿ ಸರಳ ಸಾಮೂಹಿಕ ವಿವಾಹಗಳನ್ನು ಜನಪ್ರಿಯ ಗೊಳಿಸಲು ಕನಿಷ್ಠ 25 ವಿವಾಹಗಳು ನಡೆದ ಕಾರ್ಯಕ್ರಮಕ್ಕೆ ಪ್ರತಿ ವಿವಾಹಕ್ಕೆ 2 ವರ್ಷದ ಠೇವಣಿ ರೂಪದಲ್ಲಿ ರೂ.10.000/- ಪ್ರೋತ್ಸಾಹ ಧನ ನೀಡಲು ದಿನಾಂಕ:-02-02-2007 ರಿಂದ ಯೋಜನೆಯನ್ನು ರೂಪಿಸಲಾಗಿದೆ.

ನಿಬಂಧನೆಗಳು :
1. ಇಂತಹಾ ಕಾರ್ಯಕ್ರಮದಲ್ಲಿ ವಿವಾಹವಾಗುವ ಜೋಡಿಯಲ್ಲಿ ವಧುವಿನ ಹೆಸರಲ್ಲಿ ರೂ.10,000/- ಗಳನ್ನು 2 ವರ್ಷಗಳ ನಿಶ್ಚಿತ ಠೇವನಿಯಲ್ಲಿ ಇಡಲಾಗುವುದು.

2. ಅಂತರ್ ಜಾತಿ ವಿವಾಹಗಳಿಗೆ ಈ ಯೋಜನೆಯಲ್ಲಿ ಅವಕಾಶವಿದ್ದು ಎರಡು ಪ್ರೋತ್ಸಾಹ ಧನಗಳನ್ನು ಒಟ್ಟಿಗೆ ನೀಡಲಾಗುವುದು.

3. ಸಾಮೂಹಿಕ ವಿವಾಹಗಳು ಸಂಘಟನಾಕಾರರಿಗೆ ಪ್ರತಿ ಜೋಡಿಗೆ ರೂ.100/- ರಂತೆ ಪ್ರೋತ್ಸಾಹ ಧನ ನೀಡಲಾಗುವುದು

4. ವಿವಾಹಕ್ಕೆ ಅರ್ಹವಾದ ವಯಸ್ಸಿನವರಗಿದ್ದು(ಕನಿಷ್ಠ ವಯೋಮಿತಿ) ಈ ಮೊದಲೇ ಮದುವೆಯಾಗಿ ಜೀವಂತ ಪತಿ ಅಥವಾ ಪತ್ನಿ ಇರಬಾರದು.

5. ಪ್ರೋತ್ಸಾಹ ಧನ ಪಡೆಯಲು ವಿವಾಹವನ್ನು ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ.

6. ಪ್ರತಿ ಅರ್ಜಿಯ ಜೊತೆಯಲ್ಲಿ ಅಗತ್ಯವಿರುವ ಪ್ರಮಾಣ ಪತ್ರಗಳು, ವಿವಾಹದ ಭಾವ ಚಿತ್ರದ ಪಾಸಿಟಿವ್ ಮತ್ತು ನೆಗೆಟಿವ್ ಮುಂತಾದವುಗಳನ್ನು ಲಗತ್ತಿಸಬೇಕು.

7. ವಿವಾಹ ಮುಗಿದ ಒಂದು ವಾರದಲ್ಲಿ ಹಣವನ್ನು ವಧುವಿಗೆ ಅನುಕೂಲಕರವಾದ ಬ್ಯಾಂಕ್ ಶಾಖೆಯಲ್ಲಿ ನಿಶ್ಚಿತ ಠೇವಣಿಯಲ್ಲಿ ವಧುವಿನ ಹೆಸರಿನಲ್ಲಿ ಇಟ್ಟು ವಧುವಿಗೆ ರಶಿದಿಯನ್ನು ನೀಡಲಾಗುವುದು.

ಈ ಯೋಜನೆಗೆ ಸಲ್ಲಿಸಬೇಕಾದ ದಾಖಲಾತಿಯ ವಿವರ ಕೆಳಕಂಡಂತಿದೆ.

1. ವಯಸ್ಸಿನ ಪ್ರಮಾಣ ಪತ್ರ
2. ವಿವಾಹ ಪ್ರಮಾಣ ಪತ್ರ
3. ಸಾಮೂಹಿಕ ವಿವಾಹವಾದ ಬಗ್ಗೆ ಸಂಘಟನಕಾರರಿಂದ ದೃಢೀಕರಿಸಲಾದ ವಿವಾಹವಾದ ಜೋಡಿಗಳ ಪಟ್ಟಿ
ಪ್ರಪಂಚದ ಜನಸಂಖ್ಯೆಯಲ್ಲಿ
18.9.2008


ಪ್ರಪಂಚದ ಜನಸಂಖ್ಯೆಯಲ್ಲಿ 1/3 ಭಾಗದಷ್ಟು ಮಂದಿ ದಾರುಣವಾದ ಬಡತನದ ಸಂಕಷ್ಟಕ್ಕೆ ಸಿಲುಕಿ ತೀರಾ ಹಿಂದುಳಿದ ಪ್ರದೇಶಗಳಲ್ಲಿ ವಾಸಿಸುತ್ತಿದ್ದು ಶಿಕ್ಷಣವಿಲ್ಲದೆ ಅನಾರೋಗ್ಯ ಮುಂತಾದ ತೊಂದರೆಗಳನ್ನು ಎದುರಿಸುತ್ತಿದ್ದಾರೆ.


read more...

Designed and Hosted by :
National Informatics Centre
Directorate of Social Security and Pension
Hit Count:
nic