ಆಮ್ ಆದ್ಮಿ ಬೀಮಾ ಯೋಜನೆಯಡಿ ವಿಮಾ ಮೊತ್ತವನ್ನು ಇತ್ಯರ್ಥಪಡಿಸುವ ಕಾರ್ಯವಿಧಾನಗಳು


ಆಮ್ ಆದ್ಮಿ ಬೀಮಾ ಯೋಜನೆಯಡಿ, ಫಲಾನುಭವಿಗಳು ಮರಣ ಹೊಂದಿದ ಪಕ್ಷದಲ್ಲಿ ಅಥವಾ ಅಂಗವೈಕಲ್ಯತೆ ಉಂಟಾದ ಪಕ್ಷದಲ್ಲಿ ನಾಮ ನಿರ್ದೇಶಿತರು ಹಾಗೂ ವಿಮಾದಾರರಿಗೆ ವಿಮಾ ಮೊತ್ತವನ್ನು ಇತ್ಯರ್ಥಪಡಿಸಲು ಕೆಳಕಂಡಂತಹ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
   1. ಆಮ್ ಆದ್ಮಿ ಬೀಮಾ ಯೋಜನೆಯಡಿ, ವಿಮಾ ಸೌಲಭ್ಯ ಪಡೆದ ವ್ಯಕ್ತಿಯು ಮರಣ ಹೊಂದಿದಲ್ಲಿ ಸಂಬಂಧಪಟ್ಟ ನಾಮನಿರ್ದೇಶಿತರು ಅಥವಾ ಅಂಗವೈಕಲ್ಯತೆ ಗ್ರಾಮಲೆಕ್ಕಾಧಿಕಾರಿಗಳ ಮೂಲಕ ಕೆಳಕಂಡ ದಾಖಲಾತಿಗಳೊಡನೆ ಮರಣ ಹೊಂದಿದ ಅಥವಾ ಅಂಗವೈಕಲ್ಯತೆ ಉಂಟಾದ ಆರು ತಿಂಗಳೊಳಗೆ ಅರ್ಜಿ ಸಲ್ಲಿಸುವುದು.

i) ಸಹಜ ಮರಣ ಉಂಟಾದ ಪಕ್ಷದಲ್ಲಿ
            ಅ) ವಿಮಾ ಮೊತ್ತ ಪಡೆಯಲು ಇರುವ ನಿಗದಿತ ಅರ್ಜಿಯಲ್ಲಿ ಎಲ್ಲಾ ಕಾಲಂಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಬೇಕು.
            ಆ) ದೃಢೀಕರಿಸಿದ ಮೊಲ ಮರಣ ಪ್ರಮಾಣ ಪತ್ರವನ್ನು ಲಗತ್ತಿಸುವುದು.
            ಇ) ಆಮ್ ಆದ್ಮಿ ಬೀಮಾ ಯೋಜನೆಯಡಿ ನೀಡಿರುವ ಗುರುತಿನ ಚೀಟಿಯನ್ನು ಲಗತ್ತಿಸುವುದು.

ii) ಅಪಘಾತದಿಂದ ಮರಣ ಉಂಟಾದ ಪಕ್ಷದಲ್ಲಿ
                        ಅ) ವಿಮಾ ಮೊತ್ತ ಪಡೆಯಲು ಇರುವ ನಿಗದಿತ ಅರ್ಜಿಯಲ್ಲಿ ಎಲ್ಲಾ ಕಲಂಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಬೇಕು.
                        ಆ) ದೃಢೀಕರಿಸಿದ ಮೂಲ ಮರಣ ಪ್ರಮಾಣ ಪತ್ರವನ್ನು ಲಗತ್ತಿಸುವುದು.
                        ಇ) ಪೋಲಿಸರಿಂದ ಪಡೆದ ಪ್ರಥಮ ಪರಿಶೀಲನ ವರದಿ (FIR).
                         ಈ) ಆಮ್ ಆದ್ಮಿ ಬೀಮಾ ಯೋಜನೆಯಡಿ ನೀಡಿರುವ ಗುರುತಿನ ಚೀಟಿಯನ್ನು ಲಗತ್ತಿಸುವುದು.

iii) ಶಾಶ್ವತ/ಭಾಗಶಃ ಅಂಗವಿಕಲತೆ ಉಂಟಾದ ಪಕ್ಷದಲ್ಲಿ
                        ಅ) ವಿಮಾ ಮೊತ್ತ ಪಡೆಯಲು ಇರುವ ನಿಗದಿತ ಅರ್ಜಿಯಲ್ಲಿ ಎಲ್ಲಾ ಕಾಲಂಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಬೇಕು.
                        ಆ) ಅಪಘಾತ ಹೊಂದಿದ ಬಗ್ಗೆ ದಾಖಲಾತಿಗಳು (ಪೋಲಿಸ್ ವರದಿ)
                  ಇ) ಸರ್ಕಾರಿ ಶಸ್ತ್ರ ಚಿಕಿತ್ಸಾ ತಜ್ಞರು ಅಥವಾ ಸರ್ಕಾರಿ ಮುಳೆ ತಜ್ಞರಿಂದ ಶಾಶ್ವತ/ಭಾಗಶಃ ಅಂಗವಿಕಲತೆಯು ಅಪಘಾತದಿಂದಲೇ ಸಂಭವಿಸಿರುವ ಬಗ್ಗೆ ಮತ್ತು ಯೋಜನೆಯಡಿ ಕೆಳಕಂಡಂತೆ ಸೂಚಿಸಿರುವ ಅಂಗಗಳನ್ನು ಕಳೆದುಕೊಂಡಿರುವ ಬಗ್ಗೆ ದೃಢೀಕರಣ ಪತ್ರ ಪಡೆಯುವುದು.

ಕಣ್ಣುಗಳು ಮತ್ತು ಕೈ/ಕಾಲುಗಳು

   2. ತಹಸೀಲ್ದಾರರು ವಿಮಾ ಸೌಲಬ್ಯವನ್ನು ಇತ್ಯರ್ಥಗೊಳಿಸಲು ಬಂದ ಅರ್ಜಿಗಳನ್ನು ಹದಿನೈದು ದಿನದೊಳಗೆ ಸಂಬಂಧಪಟ್ಟ ಭಾರತೀಯ ಜೀವನ ಬೀಮಾ ನಿಗಮದ ಶಾಖೆಗೆ ತಲುಪಿಸತಕ್ಕದ್ದು.

   3. ಭಾರತೀಯ ಜೀವನ ಬೀಮಾ ನಿಗಮವು ಅರ್ಜಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿ, ಕೋರಿಕೆಯು ಸಮಂಜಸವೆನಿಸಿದರೆ ನಾಮ ನಿರ್ದೇಶಿತರಿಗೆ ಅಥವಾ ಅಂಗವೈಕಲ್ಯ ಉಂಟಾದ ವ್ಯಕ್ತಿಗೆ ಚೆಕ್ ರೂಪದಲ್ಲಿ ಪರಿಹಾರದ ಮೊತ್ತವನ್ನು ಸಂಬಂಧಪಟ್ಟ ತಹಸೀಲ್ದಾರರ ಮುಖಾಂತರ ನೀಡುವುದು.

   4. ವಿಮಾ ಸೌಲಭ್ಯವನ್ನು ಇತ್ಯರ್ಥಗೊಳಿಸಿದ ನಂತರ, ಅಂತಹ ಫಲಾನುಭವಿಗಳ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲು ಸೂಕ್ತ ಕ್ರಮ ಕೈಗೊಳ್ಳುವುದು.

   5. ವಿಮಾ ಪರಿಹಾರ ನೀಡುವ ಭಾರತೀಯ ಜೀವನ ವಿಮಾ ನಿಗಮದ ತೀರ್ಮಾನವೇ ಅಂತಿಮವಾಗಿರುತ್ತದೆ.

   6. ವಿಮಾ ಪರಿಹಾರದ ಕೋರಿಕೆಯನ್ನು ಕೆಳಕಂಡ ಕಾರಣಗಳಿಂದ ತಿರಸ್ಕರಿಸಬಹುದಾಗಿರುತ್ತದೆ.

             1) ವಿಮಾ ಸೌಲಭ್ಯ ಹೊಂದಿದ ಮೃತ ವ್ಯಕ್ತಿಯು 60 ವರ್ಷಕ್ಕಿಂತ ಮೇಲ್ಪಟ್ಟವರು ದಾಖಲತಿಗಳಿಂದ ಎಂದು ತಿಳಿದು ಬಂದಲ್ಲಿ.
             2) ಮೇಲೆ ತಿಳಿಸಿದ ದಾಖಲಾತಿಗಳನ್ನು ನೀಡದಿದ್ದ ಪಕ್ಷದಲ್ಲಿ.
             3) ಅರ್ಜಿಯನ್ನು ಮರಣ ಹೊಂದಿದ ಅಥವಾ ಅಪಘಾತಗೊಳಪಟ್ಟ ದಿನಾಂಕದಿಂದ ನಿಗದಿತ ದಿನಾಂಕದೊಳಗೆ ಸಲ್ಲಿಸದೆ ಇದ್ದ ಪಕ್ಷದಲ್ಲಿ.

ಆಮ್ ಆದ್ಮಿ ಬೀಮಾ ಯೋಜನೆಯಡಿ ಗುರುತಿಸಲಾಗಿರುವ ಫಲಾನುಭವಿಗಳ ಯಾದಿಯನ್ನು ಸಂಬಂಧಪಟ್ಟ ಗ್ರಾಮಲೆಕ್ಕಾಧಿಕಾರಿಗಳು ನಿರ್ವಹಿಸುತ್ತಾರೆ.
ಆಮ್ ಆದ್ಮಿ ಯೋಜನೆಯಡಿ ವಿಮಾ ಸೌಲಭ್ಯವನ್ನು ಪಡೆಯುವುದರ ಬಗ್ಗೆ ವಿವರಗಳನ್ನು ತಾಲ್ಲೂಕು ಕಛೇರಿಗಳಲ್ಲಿ, ಶಾಶ್ವತ ಫಲಕಗಳನ್ನು ಬರೆಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪ್ರದರ್ಶಿಸಲಾಗುತ್ತದೆ ಹಾಗೂ ವಿಮಾ ಸೌಲಭ್ಯದ ಬಗ್ಗೆ ಸಾಕಷ್ಟು ನೀಡಲು ತಿಳಿಸಲಾಗಿದೆ.
ಪ್ರಪಂಚದ ಜನಸಂಖ್ಯೆಯಲ್ಲಿ
18.9.2008


ಪ್ರಪಂಚದ ಜನಸಂಖ್ಯೆಯಲ್ಲಿ 1/3 ಭಾಗದಷ್ಟು ಮಂದಿ ದಾರುಣವಾದ ಬಡತನದ ಸಂಕಷ್ಟಕ್ಕೆ ಸಿಲುಕಿ ತೀರಾ ಹಿಂದುಳಿದ ಪ್ರದೇಶಗಳಲ್ಲಿ ವಾಸಿಸುತ್ತಿದ್ದು ಶಿಕ್ಷಣವಿಲ್ಲದೆ ಅನಾರೋಗ್ಯ ಮುಂತಾದ ತೊಂದರೆಗಳನ್ನು ಎದುರಿಸುತ್ತಿದ್ದಾರೆ.


read more...

Designed and Hosted by :
National Informatics Centre
Directorate of Social Security and Pension
Hit Count:
nic